ಕಾರ್ತವೀರ್ಯ ಅರ್ಜುನನು (ಸಹಸ್ರಬಾಹು ಅರ್ಜುನ) ಪ್ರಾಚೀನ ಹೈಹಯ ರಾಜ್ಯದ ಒಬ್ಬ ಪೌರಾಣಿಕ ರಾಜನಾಗಿದ್ದನು. ಈಗಿನ ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ದಂಡೆಯಲ್ಲಿರುವ ಮಾಹಿಷ್ಮತಿ ಈ ರಾಜ್ಯದ ರಾಜಧಾನಿಯಾಗಿತ್ತು. ಕಾರ್ತವೀರ್ಯನು ಹೈಹಯರ ರಾಜನಾದ ಕೃತವೀರ್ಯನ ಮಗನಾಗಿದ್ದನು. ಇವನ ಹೆಚ್ಚಾಗಿ ಪರಿಚಿತನಾಗಿರುವ ಕಾರ್ತವೀರ್ಯವೆನ್ನುವುದು ಇವನ ಪಿತೃನಾಮವಾಗಿತ್ತು; ಇವನನ್ನು ಸರಳವಾಗಿ ಅರ್ಜುನನೆಂದು ಕೂಡ ಕರೆಯಲಾಗುತ್ತದೆ. ಇವನು ಸಾವಿರ ಕೈಗಳನ್ನು ಹೊಂದಿದ್ದನೆಂದು, ದತ್ತಾತ್ರೇಯನ ಮಹಾನ್ ಭಕ್ತನಾಗಿದ್ದನೆಂದು ವರ್ಣಿಸಲಾಗಿದೆ. ಅರ್ಜುನನು ಕರ್ಕೋಟಕ ನಾಗನನ್ನು ಸೋಲಿಸಿ ಮಾಷಿಷ್ಮತಿ ನಗರವನ್ನು ಜಯಿಸಿ ತನ್ನ ಕೋಟೆ ನಗರವನ್ನಾಗಿ ಮಾಡಿಕೊಂಡನು ಎಂದು ಅಂತಹ ಹಲವಾರು ಕಥನಗಳಲ್ಲಿ ಒಂದು ಹೇಳುತ್ತದೆ. ಕಾರ್ತವೀರ್ಯ ಅರ್ಜುನನು ಮಹಾಭಾರತದಲ್ಲಿ ಬರುವ ಮತ್ತೊಬ್ಬ ಪ್ರಮುಖ ಪಾತ್ರನಾದ ಪಾಂಡವರ ಅರ್ಜುನನೆಂದು ತಪ್ಪು ತಿಳಿಯಬಾರದು. ಕಾರ್ತವೀರ್ಯ ಅರ್ಜುನನು ವೈದಿಕ ಯುಗದ ಅತಿ ದೀರ್ಘಕಾಲ ಆಳಿದ ಚಕ್ರವರ್ತಿ ಸಾಮ್ರಾಟನಾಗಿದ್ದನು. == ಉಲ್ಲೇಖಗಳು ==